ಏಷ್ಯಾದ ತಾಳೆ ಬಾನಾಡಿ ( ) ಸಣ್ಣ ಬಾನಾಡಿ ಆಗಿದೆ. ಇದು ಆಫ್ರಿಕನ್ ಪಾಮ್ ಬಾನಾಡಿಗೆ ( ) ತುಂಬಾ ಹೋಲುತ್ತದೆ, ಮತ್ತು ಇದನ್ನು ಮೊದಲು ಒಂದೇ ಜಾತಿ ಎಂದು ಪರಿಗಣಿಸಲಾಗಿತ್ತು. ಇದು ಉಷ್ಣವಲಯದ ಏಷ್ಯಾದ ಭಾರತದಿಂದ ಫಿಲಿಪೈನ್ಸ್ ವರೆಗೆ ಸಾಮಾನ್ಯವಾಗಿ ಕಂಡುಬರುತ್ತದೆ. ಇದರ ಗಾತ್ರ ೧೩ ಸೆಂ.ಮೀ ಆಗಿದ್ದು ಮುಖ್ಯವಾಗಿ ಹಳದಿ ಮಿಶ್ರಿತ ಹೊಗೆಸೊಪ್ಪು ಬಣ್ಣದಲ್ಲಿರುತ್ತವೆ. ಇದು ಕ್ರೆಸೆಂಟ್ ಅಥವಾ ಬೂಮರಾಂಗ್ ಅನ್ನು ಹೋಲುತ್ತಿರುವ ದೀರ್ಘ ಹಿಡಿತ-ಹಿಂಬದಿ ರೆಕ್ಕೆಗಳನ್ನು ಹೊಂದಿದೆ. ದೇಹವು ತೆಳುವಾಗಿದ್ದು, ನೀಳವಾದ ಬಾಲದ ತುದಿ ಕತ್ತರಿಯಂತೆ ಕವಲಾಗಿದೆ. ಇದರ ಕರೆ ದೊಡ್ಡದಾದ ಕಿರಿಚುವಂತಿರುತ್ತದೆ. ಗಂಡು ಮತ್ತು ಹೆಣ್ಣು ಒಂದೆ ರೀತಿಯಾಗಿದ್ದು, ಮರಿ ಹಕ್ಕಿಗಳು ವಯಸ್ಕರಿಂದ ಮುಖ್ಯವಾಗಿ ತಮ್ಮ ಚಿಕ್ಕ ಬಾಲಗಳಲ್ಲಿ ಭಿನ್ನವಾಗಿರುತ್ತವೆ. ಊರ ಹೊರಗೆ ತೆಂಗು ತಾಳೆ ಮರಗಳಿರುವ ಪ್ರದೇಶಗಳಲ್ಲಿ ಹಗಲೆಲ್ಲಾ ಹಾರಡುತ್ತಾ ಕೀಟಗಳನ್ನು ಭಕ್ಷಿಸುವುದನ್ನು ಕಾಣಬಹುದು. == ಗ್ಯಾಲರಿ == == ಉಲ್ಲೇಖಗಳು ==